ಭಾಸ್ಕರ ಗುರುವರ ಮಗುಟ 

ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ |
ಭಾಸ್ಕರಗುರು ದಯನೋಟ ರಸಕಾಯ ಸವಿದುಂಬೂಟ  ||

ಭಾಸ್ಕರಗುರು ನಿಜದಯ ಲೇಸುದೋರುವ ವಿಜಯ |
ಭಾಸ್ಕರಗುರು ಅಭಯ ಹಸನಾದ ಪುಣ್ಯೋದಯ  ||೧||

ಭಾಸ್ಕರ ಕರುಣಾ ಕಟಾಕ್ಷ ಭಾಸುದು ಘನ ಪ್ರತ್ಯಕ್ಷ |
ಭಾಸ್ಕರಗುರು ನಿಜಭಿಕ್ಷ ಹಸನಾಗಿ ಮಾಡುವಾ ಸಂರಕ್ಷ  ||೨||

ಭಾಸ್ಕರಗುರು ನಿಜಬೋಧ ಭಾಸುವ ಘನಸರ್ವದಾ |
ಭಾಸ್ಕರಗುರು ಪ್ರಸಾದ ಸ್ವಸುಖದೋರುವ ಸಂವಿಸ್ತಾದ  ||೩||

ಭಾಸ್ಕರಗುರು ಉಪದೇಶ ಭಾಸುವ ಬಲು ಸಂತೋಷ |
ಭಾಸ್ಕರಗುರುವರೇಶ ಈಶನಹುದೊ ಸರ್ವೇಶ  ||೪||

ಭಾಸ್ಕರಗುರು ಕೃಪೆ ಜ್ಞಾನ ಲೇಸಾಗಿ ತೋರುವದುನ್ಮನ |
ಭಾಸ್ಕರಗುರು ದಯ ಕರುಣ ದಾಸಮಹಿಪತಿಗಾಭರಣ  ||೫||